Kerur, Nov. 1: Karnataka Rajyotsava, an occasion highlighting the significance of the Kannada land, language, culture, and heritage, was celebrated at Rashtrotthana Vidya Kendra – Kerur.
- Sri Mahadeva Maruti Jagatap from Guledagudda (an art teacher, artist, and art critic) attended the event as the chief guest.
- The program commenced with the hoisting of the national flag and the singing of the national anthem. This was followed by the hoisting of the state flag and the singing of the Nada Geethe (state anthem).
- An introductory address covered the history of the Kannada land, the significance of the unification of Karnataka, the richness of the Kannada language, and the region’s art, literature, culture, and heritage.
- A student, Vaishnavi, shared her thoughts on the Kannada land, language, and culture.
- Students presented various cultural programs.
- Viraja, dressed as Basavanna, recited a Vachana (a form of poetic teaching) by Basavanna.
- Students from the 5th grade performed a short play centred on the theme of preserving and nurturing the Kannada language.
- The event featured captivating cultural performances, including dances that showcased the glory of the Kannada land.
- In his address, the guest, Sri Mahadev Maruti Jagtap, highlighted the significance of the Kannada language. He urged everyone not only to cherish the language but also to incorporate it into their daily lives. He emphasised that it is the responsibility of every individual to preserve and nurture the culture and heritage of the Kannada land. He also introduced the region’s sculptural art to the children.
ಕೆರೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸಾರುವ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
- ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುಳೇದಗುಡ್ಡದ ಶ್ರೀ ಮಹಾದೇವ ಮಾರುತಿ ಜಗತಾಪ (ಚಿತ್ರಕಲೆ ಹಾಗೂ ಕಾರ್ಯ ಅನುಭವ ಶಿಕ್ಷಕರು ಚಿತ್ರಕಲಾಾವಿದರು, ಚಿತ್ರಕಲಾ ವಿಮರ್ಶಕರು) ಆಗಮಿಸಿದ್ದರು.
- ಕಾರ್ಯಕ್ರಮವು ರಾಷ್ಟ್ರಧ್ವಜಾರೋಹಣ ಹಾಗೂ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ ನಾಡಧ್ವಜಾರೋಹಣ ಮಾಡಿ ನಾಡಗೀತೆಯನ್ನು ಹಾಡಲಾಯಿತು.
- ಕನ್ನಡ ನಾಡಿನ ಇತಿಹಾಸ, ಕರ್ನಾಟಕ ಏಕೀಕರಣದ ಮಹತ್ವ, ಕನ್ನಡ ಭಾಷೆಯ ಶ್ರೀಮಂತಿಕೆ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಪ್ರಾಸ್ತಾವಿಕವಾಗಿ ತಿಳಿಸಲಾಯಿತು.
- ವಿದ್ಯಾರ್ಥಿನಿಯಾದ ವೈಷ್ಣವಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ತನ್ನ ಅನಿಸಿಕೆಗಳನ್ನು ಹಂಚಿಕೊಂಡಳು.
- ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
- ಬಸವಣ್ಣನವರ ವೇಷಧಾರಿಯಾಗಿ ವಿರಾಜ ಬಸವಣ್ಣನ ವಚನವನ್ನು ಪಠಿಸಿದನು.
- 5 ನೇ ತರಗತಿಯ ವಿದ್ಯಾರ್ಥಿಗಳು ಕನ್ನಡ ಉಳಿಸಿ ಬೆಳೆಸುವ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು.
- ನೃತ್ಯ ಹಾಗೂ ಕನ್ನಡ ನಾಡಿನ ವೈಭವವನ್ನು ಬಿಂಬಿಸುವ ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳು ಪ್ರದರ್ಶಿಸಲ್ಪಟ್ಟವು.
- ಅತಿಥಿಗಳಾದ ಶ್ರೀ ಮಹಾದೇವ ಮಾರುತಿ ಜಗತಾಪ ಇವರು ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿ, ಕನ್ನಡ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸಬೇಕು ಹಾಗೂ ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು. ನಾಡಿನ ಶಿಲ್ಪ ಕಲೆಯನ್ನು ಕೂಡ ಮಕ್ಕಳಿಗೆ ಪರಿಚಯಿಸಿದರು.






