Kerur, May 29: Inauguration of the New School Building, Aksharabhyasa and Vidyarambha programs were organized herein Rashtrotthana Vidya Kendra – Kerur. Sri Ma.Ni.Pra. Sri Prabhuswamy of Charantimath, Bagalkote, gave his divine presence. The event was commenced with offering puja to Bharatamata followed by performance of Ganapati Havan.
Sri Shankaranandaji, Organizing Secretary, All India Board of Education, New Delhi; Sri N Dinesh Hegde, General Secretary, Rashtrotthana Parishat; Sri Jayanna, Secretary, RVK Schools North Cluster; and many more dignitaries graced the ceremony. Sri Shankaranandaji told Parents and teachers have to sacrifice for the bright future and education of the children.
ಕೆರೂರ, ಮೇ 29: ರಾಷ್ಟ್ರೊತ್ಥಾನ ವಿದ್ಯಾಕೇಂದ್ರ – ಕೆರೂರಿನ ನೂತನ ಶಾಲಾ ಕಟ್ಟಡದ ಲೋಕಾರ್ಪಣೆ ಹಾಗೂ 2024-25ನೇ ಸಾಲಿನ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಗಲಕೋಟ ಚರಂತಿಮಠದ ಶ್ರೀ ಮ.ನಿ.ಪ್ರ.
ಶ್ರೀ ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಭಾರತಾಂಬೆಗೆ ಮಾಲಾರ್ಪಣೆ ಮಾಡಿ ಗಣಪತಿ ಹೋಮ ನಡೆಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಶ್ರೀ ಶಂಕರಾನಂದಜೀ, ಸಂಘಟನಾ ಕಾರ್ಯದರ್ಶಿ, ಅಖಿಲಭಾರತೀಯ ಶಿಕ್ಷಣ ಮಹಾಮಂಡಳ, ನವದೆಹಲಿ; ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ಪರಿಷತ್; ಶ್ರೀ ಜಯಣ್ಣ, ಕಾರ್ಯದರ್ಶಿ, ಆರ್.ವಿ.ಕೆ. ಶಾಲೆಗಳ ನಾರ್ತ್ ಕ್ಲಸ್ಟರ್; ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮಕ್ಕಳ ಉಜ್ವಲ ಭವಿಷ್ಯ ಹಾಗೂ ಶಿಕ್ಷಣಕ್ಕಾಗಿ ಪಾಲಕರು, ಶಿಕ್ಷಕರು ತ್ಯಾಗ ಮಾಡಬೇಕು ಎಂದು ಶ್ರೀ ಶಂಕರಾನಂದಜೀ ಹೇಳಿದರು.