Kerur, Sept 25: “Pandit Deen Dayal Upadhyay, an advocate of humanist principles, emphasized the significance of Swadeshi Saptaha. There should be an increased focus on utilizing indigenous materials” said Smt. Neelakantheswari, the Principal, RVK – Kerur. She provided insights regarding Pt. Deen Dayal Upadhyay during her address on his birth anniversary herein Rashtrotthana Vidya Kendra – Kerur.Pt. Deendayal Upadhyay’s birth anniversary and Swadeshi Saptaha were celebrated herein Rashtrotthana Vidya Kendra – Kerur.The Principal Smt. Neelakantheswari and all the teachers paid their respects by laying flowers on the portrait of Pandit Deen Dayal Upadhyay.“Pandit Deen Dayal Upadhyay was an Indian political figure and proponent of humanistic principles. In the 1940s, he initiated a monthly magazine titled Rashtradharma, aimed at promoting the ideals associated with the revival of Hindutva” thus, students provided insights regarding Pt. Deen Dayal Upadhyay.
ಕೆರೂರು, ಸಪ್ಟೆಂಬರ್ 25: “ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಒಬ್ಬ ಮಾನವತಾವಾದಿ ಸಿದ್ಧಾಂತದ ಪ್ರತಿಪಾದಕರು, ಸ್ವದೇಶಿ ಸಪ್ತಾಹಕ್ಕೆ ಹೆಚ್ಚಿನ ಒಂದು ಪ್ರಾಮುಖ್ಯತೆಯನ್ನು ನೀಡಿದರು. ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರೊಂದಿಗೆ ಸ್ವದೇಶಿ ವಸ್ತುಗಳನ್ನು ಹೆಚ್ಚು ಉಪಯೋಗ ಮಾಡಬೇಕು” ಎಂದು ಪಂ. ದೀನದಯಾಳ್ ಉಪಾಧ್ಯಾಯರ ಕುರಿತಾಗಿ ಪ್ರಧಾನಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಅವರು ಮಾಹಿತಿಯನ್ನು ನೀಡಿದರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಪಂ. ದೀನದಯಾಳ್ ಉಪಾಧ್ಯಾಯರ ಜಯಂತಿಯಂದು ಮಾತನಾಡುತ್ತಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಪಂ. ದೀನದಯಾಳ್ ಉಪಾಧ್ಯಾಯರ ಜಯಂತಿ ಹಾಗೂ ಸ್ವದೇಶೀ ಸಪ್ತಾಹವನ್ನು ಆಚರಿಸಲಾಯಿತು.ಪ್ರಧಾನಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಮತ್ತು ಎಲ್ಲಾ ಶಿಕ್ಷಕರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ನಮನವನ್ನು ಸಲ್ಲಿಸಿದರು.ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಭಾರತೀಯ ರಾಜಕಾರಣಿ, ಮಾನವತಾವಾದ ಸಿದ್ದಾಂತದ ಪ್ರತಿಪಾದಕರು. 1940ರ ದಶಕದಲ್ಲಿ ಹಿಂದುತ್ವದ ಪುನರುಜ್ಜೀವನದ ಆದರ್ಶಗಳನ್ನು ಹರಡಲು ರಾಷ್ಟ್ರಧರ್ಮ ಎಂಬ ಮಾಸಿಕ ಪ್ರಕಟಣೆಯನ್ನು ಪ್ರಾರಂಭಿಸಿದರು ಎಂದು ವಿದ್ಯಾರ್ಥಿಗಳು ಪಂ. ದೀನದಯಾಳ್ ಉಪಾಧ್ಯಾಯರ ಕುರಿತಾಗಿ ಮಾಹಿತಿಯನ್ನು ನೀಡಿದರು.