Kerur, Auಗ 8: Nagara Panchami was celebrated in Rashtrotthana Vidya Kendra – Kerur. Elders, Principals and teachers offered puja to Nagadev. The students sang a festive song. And spoke about the significance of the festival. Rashtrotthana Vidya Kendra – Keruru Advisory Committee Member, Dr. Basavaraja Bomble informed the children about the importance of Nagara Panchami saying that the celebration of festivals in Hindu culture should be taught to the children of today.
ಕೆರೂರು, ಆಗಸ್ಟ್ 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು.ಹಿರಿಯರು, ಪ್ರಧಾನಾಚಾರ್ಯರು ಮತ್ತು ಶಿಕ್ಷಕರು ನಾಗದೇವರಿಗೆ ಪೂಜೆಯನ್ನು ಸಲ್ಲಿಸಿದರು. ವಿದ್ಯಾರ್ಥಿನಿಯರು ಹಬ್ಬದ ಹಾಡನ್ನು ಹಾಡಿದರು ಹಾಗೂ ಹಬ್ಬದ ಮಹತ್ತ್ವದ ಕುರಿತು ಮಾತನಾಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರು ಸಲಹಾ ಸಮಿತಿಯ ಸದಸ್ಯರಾದ ಡಾ. ಬಸವರಾಜ ಬೊಂಬ್ಲೆ ಅವರು ಇಂದಿನ ಮಕ್ಕಳಿಗೆ ಹಿಂದೂ ಸಂಸ್ಕೃತಿಯಲ್ಲಿ ಬರುವ ಹಬ್ಬಗಳ ಆಚರಣೆಯನ್ನು ಶಾಲೆಗಳಲ್ಲಿ ತಿಳಿಸುವಂತಾಗಬೇಕು ಎನ್ನುತ್ತ ನಾಗರಪಂಚಮಿ ಮಹತ್ತ್ವದ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.