Keruru, Nov. 6: 69th Karnataka Rajyotsava was celebrated herein Rashtrotthana Vidya Kendra – Kerur. Sri Ramesh Belal, the Convener of the school, hoisted the national and Kannada flags. Student Kumari Sindhu talking about Kannada, the uniqueness of Kannada flag, the uniqueness of yellow and red colours “Kannada Rajyotsava is a day of significance written in golden letters on the page of India’s history. This day is known as Kannada Day or Karnataka Formation Day. Aluru Venkataraya was the first to dream of the unification of Karnataka,” she said. The students displayed costumes of Bharathambe, Rani Chennamma, Obavva, Basavanna, Kanakadasa, Sangolli Rayanna. Speaking about the speciality of Kannada language, Sri Ramesh Belal, the Convenor of the school, said, “We should be proud of our language. Education in mother tongue touches the heart. There is a position for feelings in the mother tongue” he said.
ಕೆರೂರು, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಚಾಲಕರಾದ ಶ್ರೀ ರಮೇಶ್ ಬೇಲಾಳ ಅವರು ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿ ಕುಮಾರಿ ಸಿಂಧು ಕನ್ನಡ ಕುರಿತು, ಕನ್ನಡ ಬಾವುಟದ ವಿಶೇಷತೆ, ಹಳದಿ ಮತ್ತು ಕೆಂಪು ಬಣ್ಣದ ವಿಶೇಷತೆಯನ್ನು ಕುರಿತು ಮಾತನಾಡುತ್ತ “ಕನ್ನಡ ರಾಜ್ಯೋತ್ಸವ ಭಾರತ ದೇಶದ ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಲ್ಪಟ್ಟ ಮಹತ್ತ್ವದ ದಿನವಾಗಿದೆ. ಈ ದಿನವನ್ನು ಕನ್ನಡ ದಿನ ಅಥವಾ ಕರ್ನಾಟಕ ರಚನೆಯ ದಿನ ಎಂದು ಕರೆಯುತ್ತಾರೆ. ಕರ್ನಾಟಕ ಏಕೀಕರಣ ಕನಸು ಕಂಡವರಲ್ಲಿ ಆಲೂರು ವೆಂಕಟರಾಯರು ಮೊದಲಿಗರು” ಎಂದು ಹೇಳಿದಳು. ವಿದ್ಯಾರ್ಥಿಗಳು ಭಾರತಾಂಬೆ, ರಾಣಿ ಚೆನ್ನಮ್ಮ, ಓಬವ್ವ, ಬಸವಣ್ಣ, ಕನಕದಾಸ, ಸಂಗೊಳ್ಳಿ ರಾಯಣ್ಣರವರ ವೇಷಭೂಷಣವನ್ನು ಪ್ರದರ್ಶಿಸಿದರು. ಶಾಲೆಯ ಸಂಚಾಲಕರಾದ ಶ್ರೀ ರಮೇಶ್ ಬೇಲಾಳ ಅವರು ಕನ್ನಡ ಭಾಷೆ ವಿಶೇಷತೆಯನ್ನು ಕುರಿತು ಮಾತನಾಡುತ್ತ, “ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ ಇರಬೇಕು. ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಹೃದಯಕ್ಕೆ ತಟ್ಟುತ್ತದೆ. ಮಾತೃಭಾಷೆಯಲ್ಲಿ ಭಾವನೆಗಳಿಗೆ ಬೆಲೆ ಇದೆ” ಎಂದು ಹೇಳಿದರು.