Kerur, Aug. 28: Ganesh Chaturthi was celebrated herein Rashtrotthana Vidya Kendra – Kerur. Sri Ravi R. Kangala, Associate Teacher, Urdu L.P. School, Kerur, and Sri Ramesh Baburao Belal, Convenor, Rashtrotthana Vidya Kendra, Kerur, were the chief guests. The Pradhanacharya welcomed the chief guests by offering Tulsi plants.
Sri Ramachandra Joshi, priests, Badami, performed the Ganesh Puja. Music teacher Sri Fakirappa, and Tabla teacher Sri Praveen Pattar conducted a musical program. The chief guests gave information about Ganesha. The children of class 2 performed a skit on Bala Ganapati. The students of class 6 gave speeches in Kannada and English.
ಕೆರೂರು, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ರವಿ ಆರ್. ಕಂಗಳ, ಸಹ ಶಿಕ್ಷಕರು, ಉರ್ದು ಎಲ್.ಪಿ. ಶಾಲೆ, ಕೆರೂರು ಹಾಗೂ ಅತಿಥಿಗಳಾಗಿ ಶ್ರೀ ರಮೇಶ್ ಬಾಬುರಾವ್ ಬೆಲಾಲ, ಸಂಚಾಲಕರು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಕೆರೂರು, ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳಿಗೆ ಪ್ರಧಾನಾಚಾರ್ಯರು ತುಳಸಿಗಿಡ ನೀಡಿ ಸ್ವಾಗತಿಸಿದರು. ಗಣೇಶನ ಪೂಜೆಯನ್ನು ಶ್ರೀ ರಾಮಚಂದ್ರ ಜೋಶಿ, ಪುರೋಹಿತರು, ಬಾದಾಮಿ ಅವರು ನೆರವೇರಿಸಿದರು. ಸಂಗೀತ ಶಿಕ್ಷಕರಾದ ಶ್ರೀ ಫಕೀರಪ್ಪ ಹಾಗೂ ತಬಲಾ ಶಿಕ್ಷಕರಾದ ಶ್ರೀ ಪ್ರವೀಣ್ ಪತ್ತಾರ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳು ಗಣೇಶನ ಕುರಿತು ಮಾಹಿತಿ ನೀಡಿದರು. 2ನೇ ತರಗತಿಯ ಮಕ್ಕಳು ಬಾಲ ಗಣಪತಿಯ ಕುರಿತ ಕಿರುನಾಟಕವನ್ನು ಪ್ರದರ್ಶಿಸಿದರು. 6ನೇ ತರಗತಿಯ ವಿದ್ಯಾರ್ಥಿಗಳು ಕನ್ನಡ ಹಾಗೂ ಇಂಗ್ಲೀಷಿನಲ್ಲಿ ಭಾಷಣವನ್ನು ಮಾಡಿದರು. ಮಕ್ಕಳು ಹಾಗೂ ಶಿಕ್ಷಕರು ಗಣೇಶನ ಮೂರ್ತಿಗೆ ಮಂತ್ರಾಕ್ಷತೆಯನ್ನು ಸಮರ್ಪಿಸಿದರು. ಕೊನೆಯದಾಗಿ ಪಂಚಾಮೃತ ಹಾಗೂ ಪಣಚಕಜ್ಜಾಯವನ್ನು ಹಂಚಲಾಯಿತು.








