Kerur, October 2: Mahatma Gandhi Jayanti and Lal Bahadur Shastri Jayanti were celebrated herein Rashtrotthana Vidya Kendra – Kerur. The program started with lamp lighting and floral tributes to the portraits of Gandhiji and Lala Bahadur Shastri. Smt. Vinuta, Smt. Samatha and Sri Vinayak sang Raghupati Raghava Rajaram..and Vaishnava Janato.. song. Convenor Sri Ramesh Bela called Lal Bahaddur Shastri a ‘Peaceful person’ and spoke of his simplicity. The Pradhanacharya spoke about the weapon of non-violence used by Mahatma Gandhi as the ‘Father of the Nation’. Sri Kumar, a physical educator, quoted some life lessons of Mahatma Gandhi.
ಕೆರೂರ, ಅಕ್ಟೋಬರ್ 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಕೆರೂರಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಮತ್ತು ಶ್ರೀ ಲಾಲಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಗಾಂಧಿಜೀ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ದೀಪಪ್ರಜ್ವಲನೆ ಮತ್ತು ಪುಷ್ಪಾರ್ಚನೆಯೊಂದಿಗೆ ಆರಂಭಿಸಲಾಯಿತು. ಶ್ರೀಮತಿ ವಿನುತಾ, ಶ್ರೀಮತಿ ಸಮತಾ ಮತ್ತು ಶ್ರೀ ವಿನಾಯಕ ಅವರು ರಘುಪತಿ ರಾಘವ ರಾಜಾರಾಂ.. ಮತ್ತು ವೈಷ್ಣವ ಜನತೋ..ಹಾಡನ್ನು ಹಾಡಿದರು. ಸಂಚಾಲಕರಾದ ಶ್ರೀ ರಮೇಶ್ ಬೆಲಾ ಅವರು ಲಾಲಬಹದ್ದೂರ್ ಶಾಸ್ತ್ರಿ ವರನ್ನು ‘ಶಾಂತಿಪ್ರಿಯ’ರೆಂದು ಕರೆದು ಅವರ ಸರಳತೆಯ ಕುರಿತಾಗಿ ಮಾತನಾಡಿದರು. ಪ್ರಧಾನಾಚಾರ್ಯರು ಮಹಾತ್ಮಾ ಗಾಂಧಿಯವರನ್ನು ರಾಷ್ಟ್ರಪಿತರೆಂದು ಹೇಳಿ ಅವರಿಂದ ಬಳಸಲ್ಪಟ್ಟ ಅಹಿಂಸಾ ಅಸ್ತ್ರದ ಕುರಿತು ಮಾತನಾಡಿದರು. ದೈಹಿಕ ಶಿಕ್ಷಕರಾದ ಶ್ರೀ ಕುಮಾರ್ ಅವರು ಮಹಾತ್ಮ ಗಾಂಧಿಯವರ ಕೆಲವು ಜೀವನಪಾಠಗಳನ್ನು ಉಲ್ಲೇಖಿಸಿದರು.