Kerur, June 27: The oath-taking ceremony and Hindu Samrajya Diwas were celebrated at Rashtrotthana Vidya Kendra – Kerur.
• Physical Education Teacher Sri Babu submitted the report of the school election process.
• All the elected leaders arrived on the stage in a disciplined manner and received the badge, nameplate and channel flag from the guests.
• Principal Sri Srikrishna administered the oath.
• The students took an oath to uphold the school’s discipline, cleanliness, punctuality, service spirit and leadership qualities.
• After the oath-taking, a procession was led by the students.
• Various groups marched with the Ghosh instrument.
• The students spoke about the importance of Hindu Samajwadi Divas and spoke in detail about the life, bravery, visionary administration, religious tolerance, respect for women, the concept of Swarajya and patriotism of Chhatrapati Shivaji Maharaj.
• The students performed a short play based on the life of Shivaji Maharaj very skilfully.
• In his speech, the Pradhanacharya told the students the importance of discipline, service spirit, honesty and responsible leadership. He gave an inspiring message that every student should strive to become a good citizen and an ideal leader. He expressed his feelings about Shivaji Maharaj.
ಕೆರೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ನಾಯಕತ್ವ ಪ್ರತಿಜ್ಞಾ ಸ್ವೀಕಾರ ಸಮಾರಂಭ ಹಾಗೂ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.
• ಶಾಲಾ ಚುನಾವಣೆ ಪ್ರಕ್ರಿಯೆಯ ವರದಿಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಾಬು ಸಲ್ಲಿಸಿದರು.
ಆಯ್ಕೆಯಾದ ಎಲ್ಲಾ ನಾಯಕರು ಶಿಸ್ತಿನಿಂದ ವೇದಿಕೆಗೆ ಆಗಮಿಸಿ ಅತಿಥಿಗಳಿಂದ ಬ್ಯಾಡ್ಸ, ನಾಮಪಟ್ಟಿ ಹಾಗೂ ವಾಹಿನಿಗಳ ಧ್ವಜವನ್ನು ಸ್ವೀಕರಿಸಿದರು.
• ಪ್ರಧಾನಾಚಾರ್ಯರಾದ ಶ್ರೀ ಶ್ರೀಕೃಷ್ಣ ಅವರು ಪ್ರತಿಜ್ಞಾವಚನ ಬೋಧಿಸಿದರು.
ವಿದ್ಯಾರ್ಥಿಗಳು ಶಾಲೆಯ ಶಿಸ್ತು, ಸ್ವಚ್ಛತೆ, ಸಮಯಪಾಲನೆ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಿದರು.
• ಪ್ರತಿಜ್ಞಾ ಸ್ವೀಕಾರದ ನಂತರ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.
• ಘೋಷ್ ವಾದ್ಯದೊಂದಿಗೆ ವಿವಿಧ ತಂಡಗಳು ಹೆಜ್ಜೆ ಹಾಕಿದರು.
• ಹಿಂದೂ ಸಾಮ್ರಾಜ್ಯ ದಿವಸದ ಮಹತ್ವದ ಕುರಿತು ವಿದ್ಯಾರ್ಥಿಗಳು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಶೌರ್ಯ, ದೂರದೃಷ್ಟಿಯ ಆಡಳಿತ, ಧರ್ಮಸಹಿಷ್ಣುತೆ, ಮಹಿಳೆಯರ ಗೌರವ, ಸ್ವರಾಜ್ಯದ ಪರಿಕಲ್ಪನೆ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ವಿವರವಾಗಿ ತಿಳಿಸಿದರು.
• ವಿದ್ಯಾರ್ಥಿಗಳು ಶಿವಾಜಿ ಮಹಾರಾಜರ ಜೀವನಾಧಾರಿತ ಕಿರು ನಾಟಕವನ್ನು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದರು.
• ಪ್ರಧಾನಾಚಾರ್ಯರು ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ನಾಯಕತ್ವದ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆ ಹಾಗೂ ಆದರ್ಶ ನಾಯಕನಾಗಲು ಪ್ರಯತ್ನಿಸಬೇಕು ಎಂದು ಪ್ರೇರಣಾದಾಯಕ ಸಂದೇಶ ನೀಡಿದರು. ಶಿವಾಜಿ ಮಹಾರಾಜರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.







