Kerur, Oct. 30: Sardar Vallabhbhai Patel Jayanti and Deepavali were celebrated herein Rashtrotthana Vidya Kendra – Kerur.A Rangoli competition and lantern making home competition was organized on this occasion.
1. Home Competition: Rangoli Competition for Girls:
Overview: The rangoli competition is organized house-wise and each of the four houses (Kaveri, Saraswati, Yamuna and Ganga) participates in the event. The theme of the competition was Diwali.
2. Home Competition: Lantern Making Competition for Boys:
Overview: The lantern making competition was organized house wise and each house made 2 lanterns. In charge: The competition was in charge of the respective housemasters.
At the end of the competition, the students and teachers lit the lamp and the program concluded. Celebration of Sardar Vallabhbhai Patel Jayanti and Diwali: The program started with Puja and flower laying. RVK Kerur Convenor Sri Ramesh Belal and RVK member of the committee, Sri. Gopal Ganti, were graced the program.
Students talked about Sardar Vallabhbhai Patel and Deepavali. Smt. Sharada and Pradhanacharya also spoke on the occasion. Unity and integrity were the essence of the day and the guests gave inspiring speeches.
ಕೆರೂರು, ಅ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಸರದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಹಾಗೂ ದೀಪಾವಳಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯನ್ನು ಹಾಗೂ ಲ್ಯಾಟರ್ನ್ ತಯಾರಿಕೆಯಲ್ಲಿ ಮನೆಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
1. ಮನೆಸ್ಪರ್ಧೆ: ಬಾಲಕಿಯರಿಗಾಗಿ ರಂಗೋಲಿ ಸ್ಪರ್ಧೆ:
ಅವಲೋಕನ: ರಂಗೋಲಿ ಸ್ಪರ್ಧೆಯನ್ನು ಮನೆವಾರು ಆಯೋಜಿಸಲಾಗಿದ್ದು, ಪ್ರತಿ ನಾಲ್ಕು ಮನೆಗಳು (ಕಾವೇರಿ, ಸರಸ್ವತಿ, ಯಮುನಾ ಮತ್ತು ಗಂಗಾ) ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕ್ರಮ. ಸ್ಪರ್ಧೆಯ ವಿಷಯವು ದೀಪಾವಳಿಯ ಬಗೆಗೆ ಇದ್ದಿತ್ತು.
2. ಹುಡುಗರಿಗಾಗಿ ಲ್ಯಾಂಟರ್ನ್ ತಯಾರಿಕೆಯ ಸ್ಪರ್ಧೆ:
ಅವಲೋಕನ:ಲ್ಯಾಂಟರ್ನ್ ತಯಾರಿಕೆ ಸ್ಪರ್ಧೆಯನ್ನು ಮನೆವಾರು ಆಯೋಜಿಸಲಾಗಿದ್ದು, ಪ್ರತಿ ಮನೆಯವರು 2 ಲ್ಯಾಂಟರ್ನಗಳನ್ನು ತಯಾರಿಸಿದರು. ಉಸ್ತುವಾರಿಗಳು: ಸ್ಪರ್ಧೆಯ ಉಸ್ತುವಾರಿಯನ್ನು ಆಯಾ ಗೃಹಮಾಸ್ಟರ್ ಗಳು ನೋಡಿಕೊಂಡರು. ಸ್ಪರ್ಧೆಯ ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮವು ಮುಕ್ತಾಯಗೊಂಡಿತು. ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಮತ್ತು ದೀಪಾವಳಿಯ ಆಚರಣೆ: ಪೂಜೆ ಹಾಗೂ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾ.ವಿ.ಕೆ. ಕೆರೂರು ಸಂಚಾಲಕರಾದ ಶ್ರೀ ರಮೇಶ್ ಬೇಲಾಳ್ ಮತ್ತು ರಾ.ವಿ.ಕೆ. ಸಮಿತಿ ಸದಸ್ಯರಾದ ಶ್ರೀ ಗೋಪಾಲ್ ಗಂಟಿ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ದೀಪಾವಳಿಯ ಕುರಿತು ಮಾತನಾಡಿದರು. ಶ್ರೀಮತಿ ಶಾರದಾ ಹಾಗೂ ಪ್ರಧಾನಾಚಾರ್ಯರು ಸಹ ಸಂದರ್ಭದ ಕುರಿತು ಭಾಷಣ ಮಾಡಿದರು. ಏಕತೆ ಮತ್ತು ಸಮಗ್ರತೆಯು ದಿನದ ಮಹತ್ತ್ವವಾಗಿದ್ದು, ಅತಿಥಿಗಳು ಸ್ಪೂರ್ತಿದಾಯಕ ಭಾಷಣ ಮಾಡಿದರು.