National Sports Day, Sports Event RVK – Kerur

Kerur, Aug 29: A sports event was organized as part of National Sports Day herein Rashtrotthana Vidya Kendra – Kerur.Dignitaries started the program by placing flowers on the portrait of Sri Dhyana Chandra. Students shared their opinions regarding National Sports Day. Sri Ramesh Belal, the school’s organizer, emphasized the need to prioritize sports alongside academic pursuits. He remarked that a robust mind resides in a robust body.Committee member Dr. Basavaraj Bombler also advocated for greater emphasis on traditional games. Sports activities were organized under the guidance of physical education instructors.Kho-Kho, Shot Put, Running, Steeplechase, Rope Game, Long Jump, High Jump thus students engaged in various sports activities, with the top performers being awarded first, second, and third places.

ಕೆರೂರು, ಆಗಸ್ಟ್ 29: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕ್ರೀಡಾಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೇಜರ್ ಧ್ಯಾನ್‍ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹಿರಿಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ವಿದ್ಯಾರ್ಥಿಗಳು ರಾಷ್ಟ್ರೀಯ ಕ್ರೀಡಾ ದಿನದ ಕುರಿತು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲೆಯ ಸಂಚಾಲಕರಾದ ಶ್ರೀ ರಮೇಶ್ ಬೇಲಾಳ ಇವರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಕೂಡ ಪ್ರಾಮುಖ್ಯತೆಯನ್ನು ನೀಡಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದರು. ಸಮಿತಿ ಸದಸ್ಯರಾದ ಡಾ. ಬಸವರಾಜ್ ಬೊಂಬ್ಲೆರವರು ಕೂಡ ದೇಶಿಯ ಆಟಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂದು ತಿಳಿಸಿದರು. ದೈಹಿಕ ಶಿಕ್ಷಕರು ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಯಿತು .ಖೋಖೋ, ಗುಂಡು ಎಸೆತ, ಓಟದ ಸ್ಪರ್ಧೆ, ಅಡೆತಡೆ ಓಟ, ಹಗ್ಗದ ಆಟ, ಉದ್ದ ಜಿಗಿತ, ಎತ್ತರ ಜಿಗಿತ ಮುಂತಾದ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೆಲವು ಸಾಧಿಸಿದ ವಿದ್ಯಾರ್ಥಿಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಾಗಿ ಆಯ್ಕೆ ಮಾಡಲಾಯಿತು.

Scroll to Top