Kanakadasa Jayanti Celebration in RVK – Kerur

Kerur, Nov. 18: Kanakadasa Jayanti was celebrated herein Rashtrotthna Vidya Kendra – Kerur. The Principal lit the lamp and shared his thoughts on the importance of Kanakadasa’s life and teachings. Later, some students of the Social Club dressed in traditional attire and spoke about the story of Kanakadasa, his humble early days, his love for Krishna, and his kirtans. The students spoke about how Kanakadasa’s works and his principles are still relevant in Kannada literature. They shared their thoughts on how Kanakadasa’s kirtanas emphasize devotion, humility and social harmony.

ಕೆರೂರು, ನ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು ದೀಪ ಬೆಳಗಿಸಿ ಕನಕದಾಸರ ಜೀವನ ಮತ್ತು ಬೋಧನೆಗಳ ಮಹತ್ತ್ವದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಬಳಿಕ ಸೋಶಿಯಲ್ ಕ್ಲಬ್ ನ ಕೆಲವು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿ ಕನಕದಾಸರ ಕುರಿತ ಕಥೆಯನ್ನು, ಅವರ ಕೃಷ್ಣನ ಕುರಿತ ಪ್ರೇಮ, ಕೀರ್ತನೆಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೃತಿಗಳು ಮತ್ತು ಅವರ ತತ್ತ್ವಗಳು ಇಂದಿಗೂ ಹೇಗೆ ಪ್ರಸ್ತುತ ಎನ್ನುವುದರ ಕುರಿತಾಗಿ ಮಾತನಾಡಿದರು. ಹೇಗೆ ಕನಕದಾಸರ ಕೀರ್ತನೆಗಳು ಭಕ್ತಿ, ನಮ್ರತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡುತ್ತದೆ ಎನ್ನುವುದರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.

Scroll to Top