Kalpataru Divas Celebration in RVK – Kerur

Kerur, Jan. 1: Kalpataru Divas was celebrated herein Rashtrotthana Vidya Kendra – Kerur. In her remarks, student Ku. Samanvi Kalasannavar highlights the importance of Kalpataru Divas, which she refers to as Kalpataru Utsava or Kalpataru Divas. The day was named Kalpataru Dina by Ramachandra Datta, a follower of Ramakrishna Paramahamsa. She noted that the Ramakrishna Mission, founded by Swami Vivekananda, commemorates this day in his honor. While recounting the life story of Ramakrishna Paramahamsa, Srimati Bhavani noted that Ramakrishna Paramahamsa was born on February 18, 1836, in West Bengal. His father, Khudiram Chattopadhyay, and his mother, Chandramani, played significant roles in his early life. Ramakrishna Paramahamsa was a fervent devotee of Goddess Kalika and asserted that he was the first to have an encounter with her.

ಕೆರೂರು, ಜ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಕಲ್ಪತರು ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಕು. ಸಮನ್ವಿ ಕಳಸನ್ನವರ ಕಲ್ಪತರು ದಿವಸದ ಬಗ್ಗೆ ಮಾತನಾಡುತ್ತ, ಈ ದಿನವನ್ನು ಕಲ್ಪತರು ಉತ್ಸವ ಅಥವಾ ಕಲ್ಪತರು ದಿವಸ ಎಂದು ಕರೆಯುತ್ತಾರೆ. ಈ ದಿನವನ್ನು ರಾಮಕೃಷ್ಣ ಪರಮಹಂಸರ ಶಿಷ್ಯ ರಾಮಚಂದ್ರ ದತ್ತರು ಕಲ್ಪತರು ದಿನ ಎಂದು ಹೆಸರಿಸಿದರು. ಸ್ವಾಮಿ ವಿವೇಕಾನಂದರ ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು ಎಂದಳು. ತದನಂತರ ಶ್ರೀಮತಿ ಭವಾನಿ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯ ಬಗ್ಗೆ ಮಾತನಾಡುತ್ತ, ರಾಮಕೃಷ್ಣ ಪರಮಹಂಸರು 18 ಫೆಬ್ರುವರಿ 1836 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಖುದಿರಾಮ್ ಚಟ್ಟೋಪಾಧ್ಯಾಯ, ತಾಯಿ ಹೆಸರು ಚಂದ್ರಮಣಿ. ರಾಮಕೃಷ್ಣ ಪರಮಹಂಸರು ಕಾಳಿಕಾ ದೇವಿಯ ಆರಾಧಕರಾಗಿದ್ದರು. ಮತ್ತು ಕಾಳಿಕಾ ದೇವಿಯನ್ನು ಪ್ರತ್ಯಕ್ಷವಾಗಿ ನೋಡಿದವರಲ್ಲಿ ಮೊದಲಿಗರು ಎಂದು ವಿವರಿಸಿದರು.

Scroll to Top