Kerur, June 21: International Yoga Day celebration program was organized herein Rashtrotthana Vidya Kendra – Kerur.
Sri C. H. Gowda, member of the Management Committee of Rashtrotthana Vidya Kendra, graced the program.
Kumari Sanvi Bijapur, a student of class 6, spoke about the introduction of Yoga. Yoga is a unique gift of Indian culture. It is a great process that integrates body, mind and soul. She said that those who do Yoga become fit and shine with happiness.
Yoga teacher Sri Narasimhalu spoke about the International Yoga Day celebration. The Government of India proposed the International Yoga Day to the United Nations with the aim of making the importance of Yoga known to all the people of the world. Prime Minister Sri Narendra Modi proposed this in the UNA General Assembly in September 2014. This proposal received the support of 177 countries. Finally, in December 2014, UNA announced to celebrate Yoga Day on June 21.
The Principal, Smt. Neelkantheswari, made everyone present at the program take a vow of Yoga. Then the Yoga teacher taught Yoga to all the children and teachers of the school through prayers.
The Chief Guest, Sri C. H. Gowda, explained in detail the importance of Yoga and the Panchakoshas, namely Annamayakosha, Pranamayakosha, Vigyanmayakosha, Manomayakosha and Anandamayakosha.
And distributed award certificates to the students who secured first and second positions in the SDP activities held on June 5.
ಕೆರೂರು, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ನಿರ್ವಹಣಾ ಸಮಿತಿ ಸದಸ್ಯರಾದ ಶ್ರೀ ಸಿ. ಎಚ್. ಗೌಡರ ಆಗಮಿಸಿದ್ದರು.
6ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸನ್ವಿ ಬಿಜಾಪುರ್ ಯೋಗದ ಪ್ರಾಸ್ತಾವಿಕತೆ ಕುರಿತು ಮಾತನಾಡಿದಳು. ಯೋಗ ಎಂಬುದು ಭಾರತೀಯ ಸಂಸ್ಕೃತಿಯ ಅನನ್ಯ ಕೊಡುಗೆಯಾಗಿದೆ . ಇದು ದೇಹ ಮನಸ್ಸು ಹಾಗೂ ಆತ್ಮವನ್ನು ಸಂಯೋಜಿಸುವ ಶ್ರೇಷ್ಠ ಪ್ರಕ್ರಿಯೆಯಾಗಿದೆ. ಯೋಗ ಮಾಡುವ, ಸುಯೋಗ್ಯರಾಗುವ, ಯೋಗದಿಂದ ಭಾಗ್ಯವಂತರಾಗಿ ಬೆಳಗುವ ಎಂದು ಹೇಳಿದಳು.
ಯೋಗ ಶಿಕ್ಷಕರಾದ ಶ್ರೀ ನರಸಿಂಹಲು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಮಾತನಾಡಿದರು. ಯೋಗದ ಮಹತ್ವವನ್ನು ವಿಶ್ವದ ಎಲ್ಲಾ ಜನರಿಗೆ ತಿಳಿಸುವ ಉದ್ದೇಶದಿಂದ ಭಾರತ ಸರಕಾರ ಯುನೈಟೆಡ್ ನೇಷನ್ಸ್ ಗೆ ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾವನೆ ನೀಡಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರ ಸಪ್ಟೆಂಬರ್ನಲ್ಲಿ ಯುಎನ್ಎ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ 177 ರಾಷ್ಟ್ರಗಳ ಬೆಂಬಲ ದೊರೆಯಿತು. ಕೊನೆಗೆ 2014 ಡಿಸೆಂಬರ್ ನಲ್ಲಿ ಯುಎನ್ಎ ಯೋಗ ದಿನವನ್ನು ಜೂನ್ 21ರಂದು ಆಚರಿಸಲು ಘೋಷಣೆ ಮಾಡಿತು ಎಂದು ಮಾಹಿತಿಯನ್ನು ನೀಡಿದರು.
ಪ್ರಧಾನಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಯೋಗದ ಕುರಿತು ಸಂಕಲ್ಪವನ್ನು ಮಾಡಿಸಿದರು. ನಂತರ ಯೋಗ ಶಿಕ್ಷಕರು ಶಾಲೆಯ ಎಲ್ಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಪ್ರಾರ್ಥನೆಯ ಮೂಲಕ ಯೋಗವನ್ನು ಕಲಿಸಿಕೊಟ್ಟರು.
ಮುಖ್ಯ ಅತಿಥಿಗಳಾದ ಶ್ರೀ ಸಿ. ಎಚ್. ಗೌಡರ ಅವರು ಯೋಗದ ಮಹತ್ವ ಮತ್ತು ಪಂಚಕೋಶಗಳ ಬಗ್ಗೆ ಅಂದರೆ ಅನ್ನಮಯಕೋಶ, ಪ್ರಾಣಮಯ ಕೋಶ, ವಿಜ್ಞಾನಮಯ ಕೋಶ, ಮನೋಮಯ ಕೋಶ ಮತ್ತು ಆನಂದಮಯ ಕೋಶ ಇವುಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.
ಹಾಗೂ ಜೂನ್ 5 ರಂದು ನಡೆದಿರುವ ಎಸ್ ಡಿ ಪಿ ಚಟುವಟಿಕೆಗಳಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು.