Constitution Day Celebration in RVK – Kerur

Kerur, Nov. 26: Constitution Day was celebrated herein Rashtrotthna Vidya Kendra – Kerur. The students spoke about the importance of this day and took the oath. Later, the Principal spoke about the importance of this day and said that the Constitution of India is the largest written constitution in the world. They also asked the students questions like who wrote the Constitution and had a conversation. They taught the students to follow the rules and regulations in the Constitution and to become good citizens of India.

ಕೆರೂರು, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಸಂವಿಧಾನ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಈ ದಿನದ ಮಹತ್ತ್ವದ ಕುರಿತು ಮಾತನಾಡಿದರು ಮತ್ತು ಪ್ರತಿಜ್ಞಾ ಸ್ವೀಕಾರ ಮಾಡಿದರು. ಬಳಿಕ ಪ್ರಧಾನಾಚಾರ್ಯರು ಈ ದಿನದ ಮಹತ್ತ್ವದ ಬಗ್ಗೆ ಮಾತನಾಡುತ್ತ, ಭಾರತದ ಸಂವಿಧಾನವು ವಿಶ್ವದಲ್ಲೆ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದರು. ಜೊತೆಗೆ ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಯಾರು ಬರೆದರು, ಮೊದಲಾದ ಪ್ರಶ್ನೆಗಳನ್ನು ಕೇಳಿ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಸಂವಿಧಾನದಲ್ಲಿರುವ ನೀತಿ ನಿಯಮಗಳನ್ನು ಅನುಸರಿಸಬೇಕು, ಭಾರತದ ಉತ್ತಮ ಪ್ರಜೆಗಳಾಗಬೇಕೆಂದು ಬೋಧಿಸಿದರು.

Scroll to Top