International Day against Drug Abuse and Illicit Trafficking Celebration in RVK – Kerur

Kerur, June 26: International Day Against Drug Abuse and Illicit
Trafficking was celebrated herein Rashtrotthana Vidya Kendra – Kerur. A special meeting was organized to commemorate the day and create awareness about its importance. Vijetha of class 6 gave a speech and informed the students about drug addiction. She highlighted how harmful it is to our health. She emphasized that illegal buying and selling of drugs is a serious crime that ruins the lives of many youths.Saanvi B. of class 6 preached the pledge to everyone to stand against drug abuse and illegal trafficking.

ಕೆರೂರು, ಜೂ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಅಂತಾರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಹಮ್ಮಿಕೊಂಡಿತ್ತು. ದಿನದ ಸ್ಮರಣಾರ್ಥ ಮತ್ತು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.6 ನೇ ತರಗತಿಯ ವಿಜೇತಾ ಭಾಷಣ ಮಾಡಿ ಮಾದಕದ್ರವ್ಯ ವ್ಯಸನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇದು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ಎತ್ತಿ ತೋರಿಸಿದರು. ಮಾದಕ ದ್ರವ್ಯಗಳ ಅಕ್ರಮ ಖರೀದಿ ಮತ್ತು ಮಾರಾಟವು ಅನೇಕ ಯುವಕರ ಜೀವನವನ್ನು ಹಾಳುಮಾಡುವ ಗಂಭೀರ ಅಪರಾಧವಾಗಿದೆ ಎಂದು ಅವರು ಒತ್ತಿ ಹೇಳಿದರು. 6 ನೇ ತರಗತಿಯ ಸಾನ್ವಿ ಬಿ. ಅವರು ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆಯ ವಿರುದ್ಧ ಎಲ್ಲರೂ ನಿಲ್ಲುವಂತೆ ಪ್ರತಿಜ್ಞೆಯನ್ನು ಬೋಧಿಸಿದರು.

Scroll to Top