Kerur, June 10: “Nayaka Pratijnavidhi Ceremony” was organized herein
Rashtrotthana Vidya Kendra – Kerur. The school Co-ordinator, Sri Ramesh Belal, arrived as the chief guest. The students brought the guests to the stage by marching.The election report of the students for the year 2025-26 was read out by Sri Babu, the physical education teacher, in the presence of everyone. The badging ceremony (padagrahana) was performed by the Chief Guest and the Principal. All the elected leaders came on the stage and took the badge, nameplate and the channel flag from the guests. The Principal administered the oath to all the leaders. All the leaders marched holding the school and channel flags. Nakshatra Hiremath, a 7th grade student who was elected as the school pramukh, shared her feelings. Today, along with this program, the ‘World Day Against Child Labour’ program was also celebrated. Addressing the program, a 6th grade student, Abhiraj, delivered a speech. A 6th grade student, Sudiksha administered the oath.
ಕೆರೂರು, ಜೂ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ‘ನಾಯಕತ್ವ ಪ್ರತಿಜ್ಞಾ ಸ್ವೀಕಾರ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ಶ್ರೀ ರಮೇಶ್ ಬೇಲಾಳ್ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಪಥ ಸಂಚಲನ ಮಾಡುವುದರ ಮೂಲಕ ಅತಿಥಿಗಳನ್ನು ವೇದಿಕೆಗೆ ಕರೆತಂದರು. 2025-26ನೇ ಸಾಲಿನ ವಿದ್ಯಾರ್ಥಿಗಳ ಚುನಾವಣಾ ವರದಿಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಬಾಬು ಅವರು ಎಲ್ಲರ ಸಮ್ಮುಖದಲ್ಲಿ ವಾಚಿಸಿದರು. ಬ್ಯಾಡ್ಜಿಂಗ್ ಸೆರೆಮನಿಯನ್ನು (ಪದಗ್ರಹಣ) ಅತಿಥಿಗಳು ಮತ್ತು ಪ್ರಧಾನಾಚಾರ್ಯರು ನೆರವೇರಿಸಿಕೊಟ್ಟರು.ಆಯ್ಕೆಯಾದ ಎಲ್ಲಾ ನಾಯಕರು ವೇದಿಕೆ ಮೇಲೆ ಬಂದು ಅತಿಥಿಗಳಿಂದ ಬ್ಯಾಡ್ಜ್, ನಾಮಪಟ್ಟಿ ಹಾಗೂ ವಾಹಿನಿಗಳ ಧ್ವಜವನ್ನು ತೆಗೆದುಕೊಂಡರು. ಪ್ರಧಾನಾಚಾರ್ಯರು ಎಲ್ಲಾ ನಾಯಕರುಗಳಿಗೆ ಪ್ರಮಾಣವಚನ ಮಾಡಿಸಿದರು. ಎಲ್ಲಾ ನಾಯಕರು ಶಾಲಾ ಮತ್ತು ವಾಹಿನಿಗಳ ಧ್ವಜವನ್ನು ಹಿಡಿದು ಪಥಸಂಚಲನ ಮಾಡಿದರು. ಶಾಲಾ ಪ್ರಮುಖ್ ಆಗಿ ಆಯ್ಕೆಯಾದ 7ನೇ ತರಗತಿ ವಿದ್ಯಾರ್ಥಿನಿ ನಕ್ಷತ್ರ ಹಿರೇಮಠ್ ಇವಳು ತನ್ನ ಅನಿಸಿಕೆಯನ್ನು ಹಂಚಿಕೊಂಡಳು. ಇಂದು ಈ ಕಾರ್ಯಕ್ರಮದ ಜೊತೆಯಲ್ಲಿ ʼವಿಶ್ವ ಬಾಲಕಾರ್ಮಿಕ ವಿರೋಧಿ ದಿನʼ ಕಾರ್ಯಕ್ರಮವನ್ನು ಸಹ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ 6ನೇ ತರಗತಿ ವಿದ್ಯಾರ್ಥಿ ಅಭಿರಾಜ್ ಭಾಷಣ ಮಾಡಿದನು. 6ನೇ ತರಗತಿ ವಿದ್ಯಾರ್ಥಿನಿ ಸುದೀಕ್ಷಾ ಇವಳು ಪ್ರಮಾಣವಚನ ಬೋಧಿಸಿದಳು.