Kerur, Feb. 28: ‘National Science Day’ was celebrated herein Rashtrotthana Vidya Kendra – Kerur. In his speech, Aaradhya of class 3 gave information about the Raman effect discovered by Sir C.V. Raman in 1928 and shared the information that he was awarded the Nobel Prize in Physics in 1930 for this discovery. After that, Arpita and Sindhu of class 6 conducted an activity on the scattering of light. Then, Principal Smt. Neela Kanteshwari shared information about the Raman effect and the life story of Sir C.V. Raman.
ಕೆರೂರು, ಫೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಾಯಿತು. 3ನೇ ತರಗತಿಯ ಆರಾಧ್ಯ ತನ್ನ ಭಾಷಣದಲ್ಲಿ 1928 ರಲ್ಲಿ ಸರ್ ಸಿ.ವಿ. ರಾಮನ್ ಕಂಡುಹಿಡಿದ ರಾಮನ್ ಪರಿಣಾಮದ ಬಗ್ಗೆ ಮಾಹಿತಿಯನ್ನು ನೀಡಿ, ಈ ಆವಿಷ್ಕಾರಕ್ಕಾಗಿ ಅವರಿಗೆ 1930 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು ಎನ್ನುವ ಮಾಹಿತಿಯನ್ನು ಹಂಚಿಕೊಂಡನು. ಅದರ ನಂತರ 6 ನೇ ತರಗತಿಯ ಅರ್ಪಿತಾ ಮತ್ತು ಸಿಂಧು ಬೆಳಕಿನ ಚದುರುವಿಕೆಯ ಕುರಿತು ಚಟುವಟಿಕೆ ನಡೆಸಿದರು. ನಂತರ ಪ್ರಧಾನಾಚಾರ್ಯ ಶ್ರೀಮತಿ ನೀಲಾ ಕಾಂತೇಶ್ವರಿ ಅವರು ಸರ್ ಸಿ.ವಿ. ರಾಮನ್ ಅವರ ರಾಮನ್ ಪರಿಣಾಮ ಮತ್ತು ಜೀವನ ಚರಿತ್ರೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.