The 76th Republic Day program was organized herein Rashtrotthana Vidya Kendra – Kerur Sri B.R. Patil, Principal of S.R. Kanti Science, Arts and Commerce Degree College, Mudhol, was the chief guest. Our school students welcomed the guests to the stage with a procession. After the guests hoisted the national flag, the national anthem was sung. Students of classes 4, 5 and 6 saluted the flag with a procession. Kumari Khushi and her friends presented the patriotic song. Kumar Manjunath and her friends performed a play on the importance of democracy, and students of class 6 performed a group dance. Then the chief guest addressed the students on the importance of the Constitution and the special features of the Constitution of India. The guests were honoured with a book as a token of gratitude.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಧೋಳದ ಎಸ್.ಆರ್. ಕಾಂತಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಿ.ಆರ್. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಮ್ಮ ಶಾಲಾ ವಿದ್ಯಾರ್ಥಿಗಳು ಅತಿಥಿಗಳನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಸ್ವಾಗತಿಸಿದರು. ಅತಿಥಿಗಳು ರಾಷ್ಟ್ರಧ್ವಜವನ್ನು ಹಾರಿಸಿದ ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. 4, 5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಧ್ವಜಕ್ಕೆ ವಂದನೆ ಸಲ್ಲಿಸಿದರು. ಕುಮಾರಿ ಖುಷಿ ಮತ್ತು ಅವರ ಸ್ನೇಹಿತರು ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಕುಮಾರ್ ಮಂಜುನಾಥ್ ಮತ್ತು ಅವರ ಸ್ನೇಹಿತರು ಪ್ರಜಾಪ್ರಭುತ್ವದ ಮಹತ್ವದ ಕುರಿತು ನಾಟಕವನ್ನು ಪ್ರದರ್ಶಿಸಿದರು, ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳು ಗುಂಪು ನೃತ್ಯವನ್ನು ಪ್ರದರ್ಶಿಸದರು. ನಂತರ ಮುಖ್ಯ ಅತಿಥಿಗಳು ಸಂವಿಧಾನದ ಮಹತ್ವ ಮತ್ತು ಭಾರತ ಸಂವಿಧಾನದ ವಿಶೇಷತೆಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅತಿಥಿಗಳಿಗೆ ಕೃತಜ್ಞತೆಯ ಸಂಕೇತವಾಗಿ ಪುಸ್ತಕವನ್ನು ನೀಡಿ ಗೌರವಿಸಲಾಯಿತು.