Kerur, Feb. 4: A five-day mass Surya Namaskar was performed herein Rashtrotthana Vidya Kendra – Kerur on the occasion of Rathasaptami. The students and staff of the school performed about 26 Surya Namaskars. A mass Surya Namaskar was performed on the day of Rathasaptami. Sri C. H. Gowdar, District Secretary, Vidya Bharati, Bagalkot, graced the program. Sri C. H. Gowdar spoke about the immense power of Rathasaptami and the importance of Surya Namaskar. The students performed Surya Namaskar and Yoga.
ಕೆರೂರು, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ರಥಸಪ್ತಮಿ ಪ್ರಯುಕ್ತ ಐದು ದಿನಗಳ ಕಾಲ ಸಾಮೂಹಿಕ ಸೂರ್ಯ ನಮಸ್ಕಾರವನ್ನು ನಡೆಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸುಮಾರು 26 ಸೂರ್ಯ ನಮಸ್ಕಾರವನ್ನು ಮಾಡಿದರು. ರಥಸಪ್ತಮಿಯ ದಿನದಂದು ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಯಿತು. ಅತಿಥಿಗಳಾಗಿ ಶ್ರೀ ಸಿ ಎಚ್ ಗೌಡರ್, ಜಿಲ್ಲಾ ಕಾರ್ಯದರ್ಶಿಗಳು ವಿದ್ಯಾಭಾರತಿ, ಬಾಗಲಕೋಟ, ಆಗಮಿಸಿದ್ದರು. ಶ್ರೀ ಸಿಎಚ್ ಗೌಡರ್ ರವರು ರಥಸಪ್ತಮಿಯ ದಿನದ ಪ್ರಾಮುಖ್ಯತೆ ಅಗಾಧವಾದ ಶಕ್ತಿ ಮತ್ತು ಸೂರ್ಯ ನಮಸ್ಕಾರದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಹಾಗೂ ಯೋಗವನ್ನು ಮಾಡಿದರು.