Kerur, Feb. 1: The Rashtrotsava – 2025 program for the 2024-25 academic year was organized herein Rashtrotthana Vidya Kendra – Kerur under the theme “Glory of Karnataka Folklore”. The Rashtrotthana Parishad General Secretary Sri Na. Dinesh Hegde, Principal of S.C. Nandi Math Law College, Bagalkot Dr. M. P. Chandrika Kurandwada, Administrative Head of the Northern Region of Rashtrotthana CBSE Schools Sri Jayanna, Convenor of Rashtrotthana Vidya kendra, Kerur Sri Ramesh Belal, etc. were present in this program. Sri Na. Dinesh Hegde, General Secretary of Rashtrotthana Parishad, informed about the educational activities of Rashtrotthana Vidya Kendra through his keynote speech. Sri Na. Dinesh Hegde opined that the children of today’s generation should be instilled with culture, tradition, customs and literature along with education. Chief Guest Dr. M. P. Chandrika Kurandwada addressed the program and expressed the opinion that personality should be shaped with education. Patriotism should be instilled in children. Sri Na. Dinesh Hegde, General Secretary of Rashtrotthana Parishad, felicitated Sri Mallappa, who had arrived at the educational centre and given Dollu Kunita training to the students. In the cultural program, the school teachers performed a dance to the song ‘Swagatham’. The children performed dances to folk arts and songs such as Malenad Moolanaga, Yakshagana, Moodle Kunigal Kere, Pata Kunita, Cheluvayya Cheluvu, Veeragase, Siddhi Kunita, Suggi Kunita, Mayadanta Male Bantu, Kansale and Dollu Kunita.
ಕೆರೂರ್, ಫೆ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ 2024- 25 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೋತ್ಸವ – 2025 ಕಾರ್ಯಕ್ರಮವನ್ನು “ಕರ್ನಾಟಕ ಜನಪದ ಸೊಬಗು” ಎಂಬ ವಿಷಯದ ಅಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ, ಬಾಗಲಕೋಟೆಯ ಎಸ್.ಸಿ.ನಂದಿಮಠ ಕಾನೂನು ಕಾಲೇಜಿನ ಪ್ರಾಂಶುಪಾಲರಾದಂತ ಡಾ. ಎಂ. ಪಿ. ಚಂದ್ರಿಕಾ ಕುರಂದವಾಡ, ರಾಷ್ಟ್ರೋತ್ಥಾನ ಸಿಬಿಎಸ್‍ಇ ಶಾಲೆಗಳ ಉತ್ತರ ಪ್ರಾಂತ್ಯದ ಆಡಳಿತ ಪ್ರಮುಖರಾದ ಶ್ರೀ ಜಯಣ್ಣ, ಕೆರೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಚಾಲಕರಾದ ಶ್ರೀ ರಮೇಶ್ ಬೇಲಾಳ, ಮೊದಲಾದವರು ಉಪಸ್ಥಿತರಿದ್ದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದಂತಹ ಶ್ರೀ ನಾ. ದಿನೇಶ ಹೆಗಡೆ ಅವರು ತಮ್ಮ ದಿಕ್ಸೂಚಿ ಭಾಷಣದ ಮೂಲಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಇವತ್ತಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ ಮತ್ತು ಸಾಹಿತ್ಯದ ಅಭಿರುಚಿಯನ್ನು ಮಕ್ಕಳಲ್ಲಿ ಮೂಡಿಸಬೇಕೆಂದು ಶ್ರೀ ನಾ. ದಿನೇಶ್ ಹೆಗಡೆ ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾದ ಡಾ. ಎಂ. ಪಿ. ಚಂದ್ರಿಕಾ ಕುರಂದವಾಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಣದೊಂದಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ರಾಷ್ಟ್ರಾಭಿಮಾನವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾಕೇಂದ್ರಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತದ ತರಬೇತಿಯನ್ನು ನೀಡಿರುವಂತಹ ಶ್ರೀ ಮಲ್ಲಪ್ಪ ಇವರಿಗೆ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದಂತಹ ಶ್ರೀ ನಾ. ದಿನೇಶ್ ಹೆಗಡೆ ಅವರು ಗೌರವ ಸನ್ಮಾನ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಗುರುಮಾತೆಯರು ಸ್ವಾಗತಂ ಹಾಡಿಗೆ ನೃತ್ಯವನ್ನು ಪ್ರದರ್ಶಿಸಿದರು. ಮಲೆನಾಡ ಮೂಲೆನಾಗ, ಯಕ್ಷಗಾನ, ಮೂಡಲ್ ಕುಣಿಗಲ್ ಕೆರೆ, ಪಟ ಕುಣಿತ, ಚೆಲುವಯ್ಯ ಚೆಲುವು, ವೀರಗಾಸೆ, ಸಿದ್ಧಿ ಕುಣಿತ, ಸುಗ್ಗಿ ಕುಣಿತ, ಮಾಯದಂತ ಮಳೆ ಬಂತು, ಕಂಸಾಳೆ ಹಾಗೂ ಡೊಳ್ಳು ಕುಣಿತ ಈ ರೀತಿಯಾಗಿ ಜನಪದ ಕಲೆ ಮತ್ತು ಹಾಡುಗಳಿಗೆ ನೃತ್ಯವನ್ನು ಮಕ್ಕಳು ಪ್ರದರ್ಶಿಸಿದರು.